Labour Card Karnataka ಕಾರ್ಮಿಕ ಇಲಾಖೆ ಇಂದ ಸಿಗುವ ಎಲ್ಲಾ 11 ಸೌಲಭ್ಯಗಳ ವಿವರ ಇಲ್ಲಿದೆ ನೋಡಿ
ರಾಜ್ಯದಲ್ಲಿರುವ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಸರ್ಕಾರ ದಿಂದ ಸಿಗುವ ಸೌಲಭ್ಯಗಳು
ಪ್ರತಿ ತಿಂಗಳು ಫಲಾನುಭವಿಗೆ ರೂ 3000/-ಗಳನ್ನು ಪಿಂಚಣಿ ರೂಪದಲ್ಲಿ ನೇರವಾಗಿ Bank Account ಗೆ ಜಮಾ ಮಾಡುತ್ತಾರೆ ಜೀವಿತ ಅವಧಿ ಇರುವ ವರೆಗೆ.
- ಕಾರ್ಮಿಕ ಕಾರ್ಡ್ ಇರುವ ಪ್ರತಿ ನೋಂದಾಯಿತ ಕಟ್ಟಡ ಅಥವಾ ಇತರೆ ನಿರ್ಮಾಣ ಕಾರ್ಮಿಕ ಫಲಾನುಭವಿಯು 60 ವರ್ಷ ವಯೋಮಿತಿ ಪೂರ್ಣಗೊಂಡಿರಬೇಕು.
- ಕಾರ್ಮಿಕ ಕಾರ್ಡ್ ಇರುವ ನೋಂದಾಯಿತ ಕಟ್ಟಡ ಕಾರ್ಮಿಕ 60 ವರ್ಷ ವಯಸ್ಸು ಪೂರ್ಣಗೊಳ್ಳುವ ಪೂರ್ವದಲ್ಲಿ ಕನಿಷ್ಠ 03 ವರ್ಷಗಳು ನಿರಂತರವಾಗಿ ಮಂಡಳಿಯ ಫಲಾನುಭವಿಯಾಗಿ ಮುಂದುವರೆದಿರಬೇಕು.
- ಪಿಂಚಣಿ ಪಡೆಯುವ ಕಾರ್ಮಿಕ ಮೃತರಾದರೆ ಕಾರ್ಮಿಕರ ಪತಿಗೆ ಅಥವಾ ಪತ್ನಿಗೆ ಪಿಂಚಣಿ ಸೌಲಭ್ಯ ಸಿಗುತ್ತದೆ.
ಅರ್ಜಿ ಸಲ್ಲಿಸಲು ಬೇಕಾಗುವ ಅರ್ಹತೆ ಮತ್ತು ಅರ್ಜಿಯೊಂದಿಗೆ ಸಲ್ಲಿಸಲು ಬೇಕಾಗುವ ದಾಖಲೆಗಳು.
- ಕಾರ್ಮಿಕ ಮಂಡಳಿಯಿಂದ ನೀಡಲಾದ ಮೂಲ ಗುರುತಿನ ಚೀಟಿ ಇರಬೇಕು.
- ಕಾರ್ಮಿಕನ ಉದ್ಯೋಗದ ದೃಢೀಕರಣ ಪತ್ರ ಕೊಡಬೇಕು.
- ಕಾರ್ಮಿಕನು ಜೀವಂತ ಇರುವ ಬಗ್ಗೆ ಜೀವಿತ ಪ್ರಮಾಣ ಪತ್ರ ಕೊಡಬೇಕು.
- ಕಾರ್ಮಿಕನ ಅಥವಾ ಫಲಾನುಭವಿಯ Bank Pass Book ಜೆರೊಕ್ಸ್ ಪ್ರತಿ ಕೊಡಬೇಕು
- ಪಾಸ್ ಪೋರ್ಟ್ ಅಳತೆಯ Photo ಕೊಡಬೇಕು.
- ಅರ್ಜಿಯೊಂದಿಗೆ ಸಲ್ಲಿಸಲು ಬೇಕಾಗುವ ದಾಖಲೆಗಳು.
- ಅರ್ಜಿ ಸಲ್ಲಿಸುವ ಸಂಪೂರ್ಣ ವಿಧಾನ.
- ಪಿಂಚಣಿ ಪಡೆಯುವ ಕಾರ್ಮಿಕ ಮೃತರಾದರೆ ಪತ್ನಿ ಅಥವಾ ಪತಿ ಪಿಂಚಣಿ ಪಡೆಯಲು ಅರ್ಜಿ ಸಲ್ಲಿಸುವ ವಿಧಾನ ಮತ್ತು ಬೇಕಾಗುವ ದಾಖಲೆಗಳು.
- ಕಾರ್ಮಿಕರಿಗೆ ಪ್ರತಿ ತಿಂಗಳು ರೂ 3000/- ಪಿಂಚಣಿ ಸಿಗುತ್ತದೆ.
- ಕಾರ್ಮಿಕ ಕಾರ್ಡ್ ಇಂದ ಅಪಘಾತ ಪರಿಹಾರ 2 ಲಕ್ಷ ರೂ ಗಳ ಪರಿಹಾರ ಸಹಾಯಧನ ಸಿಗುತ್ತದೆ.
- ಕಾರ್ಮಿಕ ಕಾರ್ಡ್ ಇಂದ ವೈದ್ಯಕೀಯ ಸಹಾಯಧನ ಪ್ರತಿ ದಿನಕ್ಕೆ 300 ರೂ ನಂತೆ ಗರಿಷ್ಠ ರೂ.20,000/- ಸಹಾಯಧನ ಸಿಗುತ್ತದೆ.
- ಕಾರ್ಮಿಕ ಕಾರ್ಡ್ ಇಂದ "ತಾಯಿ ಮಗು ಸಹಾಯ ಹಸ್ತ" ರೂ.6000/- ಗಳು ಆಗಿರುತ್ತದೆ ಪ್ರತಿ ತಿಂಗಳು 500/- ರೂ.ಗಳಂತೆ ನೋಂದಾಯಿತ ಮಹಿಳಾ ಫಲಾನುಭವಿಗೆ ಸಹಾಯಧನ ಸಿಗುತ್ತದೆ.
- ಹೆರಿಗೆ ಸೌಲಭ್ಯ "ತಾಯಿ ಲಕ್ಷ್ಮೀ ಬಾಂಡ್" ನೋಂದಾಯಿತ ಮಹಿಳಾ ಕಾರ್ಮಿಕರ ಗಂಡು ಅಥವಾ ಹೆಣ್ಣು ಮಗುವಿನ ಜನನಕ್ಕೆ ರೂ.50,000/- ಮಗುವಿನ ಹೆರಿಗೆಗೆ ನೀಡುವ ಸಹಾಯ ಧನ ಮೊದಲ ಎರಡು ಹೆರಿಗೆಗೆ ಸಹಾಯಧನ ಸಿಗುತ್ತದೆ.
- ಮದುವೆ ಸಹಾಯ ಧನ "ಗೃಹ ಲಕ್ಷ್ಮೀ ಬಾಂಡ್" ಕಾರ್ಮಿಕರ ಮೊದಲ ಮದುವೆಗೆ ಅಥವಾ ಕಾರ್ಮಿಕರ ಅವಲಂಭಿತರ ಮದುವೆಗೆ ನೀಡುವ ಸಹಾಯ ಧನ ರೂ.60,000/- ಸಿಗುತ್ತದೆ.
- ಪ್ರಮುಖ ವೈಧ್ಯಕೀಯ ವೆಚ್ಚ ಸಹಾಯ ಧನ "ಕಾರ್ಮಿಕ ಚಿಕಿತ್ಸಾ ಭಾಗ್ಯ" ಕಾರ್ಮಿಕರಗೆ ಹಾಗು ಕಾರ್ಮಿಕರ ಅವಲಂಭಿತರ ಪ್ರಮುಖ ಖಾಯಿಲೆಗಳ ವೆಚ್ಚಕ್ಕಾಗಿ ಗರಿಷ್ಠ ರೂ.2 ಲಕ್ಷಗಳವರೆ ಹಣ ಮಂಜೂರು ಮಾಡುತ್ತಾರೆ.
- ಕಟ್ಟಡ ಕಾರ್ಮಿಕನ ಮಗ ಅಥವಾ ಮಗಳ ಶಿಕ್ಷಣದ ನೆರವಿಗಾಗಿ "ಶೈಕ್ಷಣಿಕ ಧನಸಹಾಯ" Scholarship ಸಿಗುತ್ತದೆ. ಎಷ್ಟು ಹಣ ಸಿಗುತ್ತದೆ ಅಂತ ಕೆಳಗೆ ಮಾಹಿತಿ ಇದೆ ನೋಡಿ.
- ನೋಂದಾಯಿತ ಕಾರ್ಮಿಕ ಅಥವಾ ಕಾರ್ಮಿಕಳಿಗೆ ನಿರ್ಮಾಣ ಕೆಲಸದ ಸಮಯದಲ್ಲಾದ ಅಪಘಾತದಿಂದ ಅಥವಾ ಯಾವುದಾದರೂ ಖಾಯಿಲೆಯಿಂದ ಭಾಗಶಃ ದುರ್ಬಲತೆಗೆ ಒಳಗಾದಾಗ ಅವರಿಗೆ ಸರ್ಕಾರದ ಅಧಿಸೂಚನೆಯಂತೆ ರೂ.2000/-ಗಳನ್ನು ದುರ್ಬಲತೆ ಪಿಂಚಣಿ ಸಿಗುತ್ತದೆ. ರೂ.2 ಲಕ್ಷದ ಗರಿಷ್ಟ ಮೊತ್ತ ಕಾರ್ಮಿಕ ಶೇಡಾವಾರು ದುರ್ಬಲತೆಗೆ ಅನುಗುಣವಾಗಿ ದುರ್ಬಲರಿಗೆ ಪರಿಹಾರ ಸಹಾಯಧನ ಸಿಗುತ್ತದೆ.
- ಕಟ್ಟಡ ಕಾರ್ಮಿಕನ ಅಂತ್ಯಕ್ರಿಯೆ ವೆಚ್ಚವನ್ನು ಭರಿಸಲು ಮರಣಕ್ಕೀಡಾದಾಗ ನೋಂದಾಯಿತ ಕಟ್ಟಡ ಕಾರ್ಮಿಕನ ಅಂತ್ಯಕ್ರಿಯೆ ವೆಚ್ಚವನ್ನು ಭರಿಸಲು ರೂ.4000/-ಗಳನ್ನು ಹಾಗೂ ಮರಣದಿಂದ ಕುಟುಂಬದಲ್ಲಿ ಆಗುವ ಆರ್ಥಿಕ ಸಂಕಷ್ಟವನ್ನು ಎದುರಿಸಲು ಅನುಗ್ರಹ ರಾಶಿಯೆಂದು ರೂ.71,000/-ಗಳನ್ನು ನಾಮನಿರ್ದೇಶಿತನಿಗೆ ಮಂಜೂರು ಮಾಡುತ್ತದೆ.
- ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲಿ ಮನೆಯಿಂದ ಕೆಲಸದ ಸ್ಥಳಕ್ಕೆ ತೆರಳಲು ಪ್ರಯಾಣಿಸಲು ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಉಚಿತ ಬಸ್ ಪಾಸ್ ಸಿಗುತ್ತದೆ.
ಇನ್ನೂ ಹೆಚ್ಚಿನ ಮಾಹಿತಿಗಾಗಿ ಇಲ್ಲಿ Click ಮಾಡಿ ಇಲಾಖೆಯ Website Open ಆಗುತ್ತದೆ.