Seva Sindhu ಕರ್ನಾಟಕ ಸರ್ವಿಸ ಸಂಪೂರ್ಣ ಮಾಹಿತಿ
ಸೇವಸಿಂಧು ಎಂಬ ಸೇವೆಯು ಸರ್ಕಾರವು ನಾಗರಿಕರಿಗಾಗಿ ಪ್ರಾರಂಭಿಸಿದೆ.
ಒಂದೆ ಸ್ಥಳದಲ್ಲಿ ಎಲ್ಲ ರೀತಿಯ ಸೇವೆಗಳನ್ನು ಒದಗಿಸುವ ಉದ್ದೇಶದಿಂದ ಈ ಒಂದು ವಿಶೇಷ ಸೇವೆ ಪ್ರಾರಂಭಿಸಿದೆ.
ಎಲ್ಲಾ ರೀತಿಯ ಆನ್ಲೈನ್ ಸೇವೆಗಳು ಪಡೆಯಲು ಜನರು ಮೊದಲು ಅಗತ್ತ್ಯವಾಗುವ ಸರ್ವೀಸನ್ನು ಮನೆಯಲ್ಲಿ ಕುಳಿತುಕೊಂಡು Citizen Login ಮಾಡಿ ಪಡೆಯಬಹುದು ಹಾಗು ಮಧ್ಯವರ್ತಿಗಳ ಕೆಲಸ ಎನು ಇರುವದಿಲ್ಲ ಸ್ವಂತ್ ಅರ್ಜಿ ಹಾಕಿ ಪ್ರಮಾಣ ಪತ್ರ ಪಡೆಯಬಹುದು.
ಭಾರತ ಸರ್ಕಾರ, ರಾಜ್ಯ ಸರ್ಕಾರಗಳು ಮತ್ತು ಸ್ಥಳೀಯ ಸರ್ಕಾರಗಳು ಕೇಂದ್ರ, ರಾಜ್ಯ ಅಥವಾ ಸ್ಥಳೀಯ ಮಟ್ಟದಲ್ಲಿ ನಾಗರಿಕರಿಗೆ ಮುಖ್ಯವಾಗಿ ಸರ್ಕಾರದಿಂದ ನಾಗರಿಕರಿಗೆ ಮತ್ತು ಸರ್ಕಾರದಿಂದ ವ್ಯವಹಾರಕ್ಕೆ, ವಿವಿಧ ಸೇವೆಗಳನ್ನು ಒದಗಿಸುತ್ತವೆ.
1. ಸೇವಾ ಸಿಂಧು ಅಂದ್ರೆ ಏನು.?
Seva Sindhu 750 ಕ್ಕಿಂತಲೂ ಹೆಚ್ಚಿನ ಅರ್ಜಿಗಳನ್ನು ಸಲ್ಲಿಸಬಹುದು ರಾಜ್ಯ ಸರ್ಕಾರದ ಪ್ರತಿಯೊಂದು ಸೇವೆಗಳನ್ನು ಇಲ್ಲಿಂದ ಪಡೆಯಬಹುದು ಪ್ರತಿಯೊಂದು ಅರ್ಜಿ ಸಲ್ಲಿಸಿದ ಕೆಲವು ದಿನಗಳಲ್ಲಿ ನಿಮ್ಮ ಪ್ರಮಾಣಪತ್ರ ಸಂಪೂರ್ಣವಾಗಿ ತಯಾರಾಗಿ ನಿಮಗೆ ಸಿಗುತ್ತದೆ.
ಸೇವಾ ಸಿಂಧು ಎನ್ನುವಂತಹ ರಾಜ್ಯಸರ್ಕಾರದ ಒಂದು ವಿಶೇಷ ಯೋಜನೆ ಅಂತಾನೆ ಹೇಳಬಹುದು ಗ್ರಾಮಗಳಲ್ಲಿ, ಕರ್ನಾಟಕದಲ್ಲಿ ನೆಮ್ಮದಿ ಕೇಂದ್ರಗಳಲ್ಲಿ,ಗ್ರಾಮ ಒನ್ ಕೇಂದ್ರ ದಲ್ಲಿ, ಅಟಲ್ ಜಿ ಜನಸ್ನೇಹಿ ಕೇಂದ್ರಗಳಲ್ಲಿ, ಇರುವಂತಹ ಸೇವೆಗಳು ಸೇವಾ ಸಿಂಧು ದಲ್ಲಿ ಸಿಗುತ್ತವೆ.
2. ಸೇವಾ ಸಿಂಧು ಯಾವ ರೀತಿ ಬಳಸಬೇಕು.?
ಮೊದಲು ಕೆಳಗೆ ಕೊಟ್ಟಿರುವಂತಹ ಲಿಂಕನ್ನು ಕ್ಲಿಕ್ ಮಾಡಿದಾಗ ಸೇವಾ ಸಿಂಧು ವೆಬ್ಸೈಟ್ ಓಪನ್ ಆಗುತ್ತೆ ನಂತರ ಈ ಒಂದು ವೆಬ್ಸೈಟ್ ಮೊಬೈಲ್ನಲ್ಲಿ ಓಪನ್ ಆಗುತ್ತೆ ಕಂಪ್ಯೂಟರ್ನಲ್ಲಿ ಓಪನ್ ಆಗುತ್ತೆ ವೆಬ್ಸೈಟ್ ಓಪನ್ ಮಾಡಿ.
Seva Sindhu Website link- Click Here
For Seva Sindhu Registration Video- Click Here
ಮುಖ್ಯ ಪೇಜಿನಲ್ಲಿ ರಜಿಸ್ಟರ್ ಎನ್ನುವಂತಹ ಆಪಷನ್ ಅನ್ನು ಕ್ಲಿಕ್ ಮಾಡಿ ನಿಮ್ಮ ಮೊಬೈಲ್ ಸಂಖ್ಯೆ ಹಾಗೂ ನಿಮ್ಮ ಮೇಲ್ ಐಡಿ ಎಂಟ್ರಿ ಮಾಡಿ ಅಲ್ಲಿ ನಿಮ್ಮ ಖಾತೆಯನ್ನು ರಚಿಸಿ ಕೊಳ್ಳಬೇಕು. ನಂತರ ಮತ್ತೆ ಮುಖ್ಯ ಪೇಜಿನಲ್ಲಿ ನಿಮ್ಮ ಮೊಬೈಲ್ ಸಂಖ್ಯೆ ಅಥವಾ ಮೇಲ್ ಐಡಿ ಹಾಕಿ ಲಾಗಿನ್ ಆಗಬೇಕು.
3. ಅರ್ಜಿಗಳನ್ನು ಯಾವ ರೀತಿ ಸಲ್ಲಿಸಬೇಕು.?
ಮೇಲೆ ಹೇಳಿರುವ ಹಾಗೆ ಸೇವಾಸಿಂಧು ಓಪನ್ ಮಾಡಿ ರಿಜಿಸ್ಟ್ರೇಷನ್ ಮಾಡಿ ಮಾಡಿದ ನಂತರ ನಿಮ್ಮ ಮುಂದೆ ಸೇವಾಸಿಂಧು ವಿನ ಮೆನ್ ಫೇಸ್ ಈ ರೀತಿಯಾಗಿ ಓಪನ್ ಆಗುತ್ತದೆ ಪಕ್ಕದಲ್ಲಿ ಮೇಲೆ ಬಲಗಡೆ ನಿಮ್ಮ ಪ್ರೊಫೈಲ್ ಕಾಣುತ್ತದೆ.
ನಂತರ ನೀವು ಓಪನ್ ಮಾಡಿರುವ ಸೇವಾ ಸಿಂಧುವಿನ ಮುಖಪುಟದಲ್ಲಿ ಎಡಭಾಗದಲ್ಲಿ ಸೇವೆಗಳನ್ನು ಬಳಸಲು ಆಪ್ಷನ್ ನೀಡುತ್ತಾರೆ. ಈ ಒಂದು ಮುಖಪುಟ ನಿಮ್ಮ ಮೊಬೈಲದಲ್ಲಿ ಓಪನ್ ಆಗುತ್ತದೆ ಯಾವುದೇ ತರಹದ ಸ್ಕ್ರೀನ್ ಟಚ್ ಮೊಬೈಲ ಇದ್ದರೆ ತುಂಬಾ ಸುಲಭವಾಗಿ ಓಪನ್ ಮಾಡಿಕೊಳ್ಳಬಹುದು.
ಅಲ್ಲಿ ಸುಮಾರು 750 ಕ್ಕಿಂತಲೂ ಹೆಚ್ಚಿನ ಸೇವೆಗಳ ಪಟ್ಟಿ ಸಿಗುತ್ತದೆ ಅದರಲ್ಲಿ ನಿಮಗೆ ಅವಶ್ಯಕವಿರುವ ಅರ್ಜಿಯನ್ನು ಹಾಕಬಹುದು ಆನ್ಲೈನ್ ಮುಖಾಂತರ ಸ್ವಂತ ಅಥವಾ ನಿಮ್ಮ ಕುಟುಂಬದ ಸದಸ್ಯರು ಅರ್ಜಿಗಳನ್ನು ಆನ್ ಲೈನ್ ನಲ್ಲಿ ಸಲ್ಲಿಸಬಹುದು ಯಾರ ಹೆಸರಲ್ಲಿ ಅರ್ಜಿಯನ್ನು ಸಲ್ಲಿಸುವಿರಿ ಅವರ ಹೆಸರಲ್ಲಿ ಮೊದಲು ನೋಂದಣಿ ಮಾಡಿಕೊಳ್ಳಬೇಕು ನಂತರ ಅರ್ಜಿಯನ್ನು ಸಲ್ಲಿಸಲು ಸಾಧ್ಯವಾಗುತ್ತದೆ.
ಇದೇ ರೀತಿ ಇನ್ನೂ ಅನೇಕ ಹೆಚ್ಚಿನ ಮಾಹಿತಿ ಹಾಗೂ ಸರ್ಕಾರದ ವಿವಿಧ ಯೋಜನೆಗಳ ಮಾಹಿತಿ ಒಂದು Seva Sindhu ನಲ್ಲಿ ಸಿಗುತ್ತದೆ ಸಾರ್ವಜನಿಕರಿಗೆ.